Kannada Puzzles

ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ ಉತ್ತರ: ಕಿವಿ
ಅಂಕು ಡೊಂಕಾದ ಬಾವಿಯಲ್ಲಿ ಅಂಗಲಾಚಿದರೂ ಇಂಕರ ನೀರಿಲ್ಲ. ಉತ್ತರ: ಕಿವಿ
ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ, ಉಚ್ಚಿ ಹುಯ್ಯುವ ಮರ ಉತ್ತರ: ಕಬ್ಬು
ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ ಉತ್ತರ: ಕಣ್ಣು
ಅಕ್ಕ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ. ಉತ್ತರ: ಮೂಗು
ಅಕ್ಕ ಪಕ್ಕ ಚದುರಂಗ, ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ. ಇದು ಏನು? ಉತ್ತರ: ದತ್ತುರಿಯ ಮುಳ್ಳು.
ಅಕ್ಕ ಹೊಟ್ಟೆ ಬಿರಿಯ ಉಂಡರೆ, ತಂಗಿ ಮಾಡ್ಕೊತಾಳೆ ವಾಂತಿ. ಉತ್ತರ: ಕೊಡೋಲೆ
ಅಕ್ಕ-ತಂಗಿಯರು ಚಿಟ್ಟುಳ್ಳಿ ಮರದಲ್ಲಿ ಚಿಗುರು ಕೊಯ್ತಾರ. ಉತ್ತರ: ಮೇಕೆ
ಅಕ್ಕಕ್ಕಾ ಸಿವನ್ ನೋಡೆ, ಸಿವನ ಸುತ್ತ ಪತ್ರೆ ನೋಡೆ, ಸಿವನ ಒಳ್ಳ ಗಂಗೆ ನೋಡೆ, ಮಸಣದ ಬೂದಿ ಮೈಮ್ಯಾಗ ನೋಡೆ, ಕುಂತ ಭಂಗಿ ತಪಸ್ಸು ನೋಡೆ. ಉತ್ತರ: ಬೂದುಗುಂಬಳ
ಅಕ್ಕಣ್ಣನಿಗೆ ಆರು ಕಣ್ಣು, ಮುಕ್ಕಣ್ಣಂಗೆ ಮೂರು ಕಣ್ಣು, ಲಿಂಗಪ್ಪನಿಗೆ ಒಂದೇ ಕಣ್ಣು ಉತ್ತರ: ಕೊಳಲು, ತೆಂಗಿನಕಾಯಿ, ಸೂಜಿ
ಅಕ್ಕನ ಕೈಗೆ ಇಕ್ಕೊರುಂಟು, ಅಳಿಸೋರಿಲ್ಲ ಉತ್ತರ: ಹಚ್ಚೆ/Tattoo
ಅಕ್ಕನ ಮೇಲೆ ಛತ್ರಿ ಉತ್ತರ: ರೆಪ್ಪೆ
ಅಕ್ಷರಗಳಿದ್ದರೂ ಪುಸ್ತಕವದಲ್ಲ. ದುಂಡಿಗಿದ್ದರು. ಚಿತ್ರವದಲ್ಲ ಮೃಗರಾಜನಿದ್ದರೂ ಅರಣ್ಯವಲ್ಲ ಅದಿಲ್ಲದ್ದರೆ ದಿನಗಳೆಯುವಂತಿಲ್ಲ ಅದ್ಯಾರು. ಉತ್ತರ: ನಾಣ್ಯ
ಅಕ್ಷರಗಳಿದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಾಗಿದ್ದರೂ ಚಕ್ರವಲ್ಲ, ನಾನ್ಯಾರು. ಉತ್ತರ: ನಾಣ್ಯ
ಅಕ್ಷರಗಳಿದ್ದರೂ ಪುಸ್ತಕವಲ್ಲ! ಸಿಂಹವಿದ್ದರೂ ಅರಣ್ಯವಲ್ಲ! ದುಂಡಾಗಿದ್ದರೂ ಚಕ್ರವಲ್ಲ! ನಾನ್ಯಾರು? ಉತ್ತರ: ನಾಣ್ಯ
ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು ಉತ್ತರ: ಈರುಳ್ಳಿ
ಅಂಗಡಿಯಲ್ಲಿ ಮಾರುವುದಿಲ್ಲ, ತಕ್ಕಡಿಯಲ್ಲಿ ತೂಗುವುದಿಲ್ಲ, ಅದಿಲ್ಲದಿದ್ದರೆ ನಮ್ಮ ಮನೆಯಲ್ಲಿ ಹಬ್ಬ ಆಗುವುದೇ ಇಲ್ಲ ಉತ್ತರ: ಸಗಣಿ
ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು ಉತ್ತರ: ಈರುಳ್ಳಿ
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಣ್ಣ, ಬಾವಿಗೆ ಹಾಕಣ್ಣ ಉತ್ತರ: ಬಾಳೆ ಹಣ್ಣು
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ ಉತ್ತರ: ಬಾಳೆಹಣ್ಣು
ಅಗಲವಾದ ಮಾಳಿಗೆಗೆ ಒಂದೇ ಕಂಬ ಉತ್ತರ: ಛತ್ರಿ
ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? ಉತ್ತರ: ಕೋಳಿ
ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ ಉತ್ತರ: ಆಕಾಶ, ನಕ್ಷತ್ರ
ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ ಉತ್ತರ: ಬಳೆ
ಅಜ್ಜನ್ನ ಹೊಟ್ಟೆ ಹಿಡ್ಕೊಂಡು, ಮೊಮ್ಮಗ ನೇತಾಡ್ತಾ ಅವ್ನೆ ಉತ್ತರ: ಗೇರುಬೀಜ/Cashew Nut
ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು ಉತ್ತರ: ಬೆಳ್ಳುಳ್ಳಿ
ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ ಉತ್ತರ: ಮೋಡ, ನಕ್ಷತ್ರ
ಅಟ್ಟದ ತುಂಬಾ ಹಗ್ಗ ಹಾಸೈತೆ, ಅದರ ಮೇಲೆ ಭೂತ ಕೂತವ್ನೆ ಉತ್ತರ: ಕುಂಬಳ ಕಾಯಿ
ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ ಉತ್ತರ: ಕುಂಕುಮ
ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ. ಉತ್ತರ: ಕಣ್ಣು
ಅಣ್ಣ ತಮ್ಮ ಇಬ್ಬರು ಮುರಿಯದ ಹಾಗೆ 3 ರೊಟ್ಟಿ ತಿನ್ನುತ್ತಾರೆ ಉತ್ತರ:
ಅಣ್ಣ ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ! ಆದರೆ ಯಾರೂ ಮುಂದೆ ಹೋಗುವುದಿಲ್ಲ ಉತ್ತರ: ಕಾಲುಗಳು
ಅಣ್ಣ ತಮ್ಮನ ಮನೆಗೆ ಹೋಗಲ್ಲ ತಮ್ಮ ಅಣ್ಣನ ಮನೆಗೆ ಹೋಗಲ್ಲ; ಅಕ್ಕ-ಪಕ್ಕದಲ್ಲೇ ಇರುವ ಸಹೋದರರು ಯಾರು. ಉತ್ತರ: ಕಣ್ಣು
ಅಣ್ಣ ಮನೆ ಕಾಯ್ತಾನೆ ತಮ್ಮ ಬೀದಿ ತಿರುಗ್ತಾನೆ. ಉತ್ತರ: ಬೀಗ ಕೀಲ
ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು ಉತ್ತರ: ಏಲಕ್ಕಿ
ಅಪ್ಪ ಅಪ್ಪ ಮರ ನೋಡು, ಮರದೊಳಗೆ ಎಲೆ ನೋಡು, ಎಳೆಯೊಳಗೆ ತೂತು ನೋಡು, ತೂತೊಳಗೆ ಮಾತು ನೋಡು ಉತ್ತರ: ಪುಸ್ತಕ
ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ ಉತ್ತರ: ಅಡಿಕೆ ಮರ
ಅಪ್ಪಗಿಂತ ಮಗನೇ ಮೊದಲು ಹುಟ್ಟುತ್ತಾನೆ ಉತ್ತರ: ಹೋಗೆ
ಅಪ್ಪನ ದುಡ್ಡು ಎಣಿಸೊಕಾಗಲ್ಲ, ಅವ್ವನ ಸೀರೆ ಮಡಿಸೊಕ್ಕಾಗಲ್ಲ ಉತ್ತರ: ನಕ್ಷತ್ರ/ಆಕಾಶ
ಅಪ್ಪನ ದುಡ್ಡು ಎಣಿಸೊಕ್ಕಾಗಲ್ಲ! ಅವ್ವನ ಸೀರೆ ಮಡ್ಸೊಕಾಗಲ್ಲ ಉತ್ತರ: ನಕ್ಷತ್ರ/ಆಕಾಶ
ಅಪ್ಪಾಂದ್ರೆ ಹೊಡಿತದೆ, ಅವ್ವಾಂದ್ರೆ ಹೊಡಿದಿಲ್ಲ ಉತ್ತರ: ತುಟಿಗಳು
ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು. ಉತ್ತರ: ಯುಗಾದಿ
ಅಮ್ಮನ ಆಕಾಶವಾಣಿ ನಾನು ಉತ್ತರ: ಮಗು
ಅಮ್ಮನ ಸೀರೆ ಭಾರಿ ಸೀರೆ ನೆರಿಗೆ ಎಣಿಸೋಕೆ ನಾರಾಯಣನಿಗೂ ಸಾಧ್ಯವಿಲ್ಲ. ಉತ್ತರ: ಸಮುದ್ರ
ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ ಉತ್ತರ: ಆಕಾಶ/ನಕ್ಷತ್ರಗಳು
ಅರಳುತ್ತೆ, ಹೂವಲ್ಲ! ಬಿಸಿಲಿಗೆ ಬಾಡುವುದಿಲ್ಲ ಉತ್ತರ: ಛತ್ರಿ
ಅವ್ವ ನೋಡುದ್ರೆ ಕುಳ್ಳಿ, ಮಗಳ ನೋಡುದ್ರೆ ಮಾರುದ್ದ ಅವ್ಳೆ ಉತ್ತರ: ಸೂಜಿ ದಾರ
ಅವ್ವ ಮುಳ್ಳಿ, ಮಗಳು ಕೆಂಪ್ಗೆ ಚಂದಾಗವಳೆ ಉತ್ತರ: ಹಲಸು
ಆಕಾರದಲ್ಲಿ ಚಂದ್ರ ಹೊಳಪಿನಲ್ಲಿ ಸೂರ್ಯ ಈ ಜಗತ್ತಿನಲ್ಲಿ ನನ್ನನ್ನು ಬಯಸದಿರುವವರೇ ಇಲ್ಲ ನಾನ್ಯಾರು? ಉತ್ತರ: ನಾಣ್ಯ
ಆಕಾಶ ಮಾವಿನ ಕಾಯಂಗೆ, ತಿರುವು ಬಂದುಲ್ಲಿನ ಗರಿಯಗಲ, ಒಂದು ಬೆಟ್ಟಿಗೂ, ನೂರಾರು ಮಕ್ಕಳಿಗೆ ಒಂದೇ ಉಡಿದಾರ. ಉತ್ತರ: ಪೊರಕೆಗೆ ಕಟ್ಟಿದ ದಾರ
ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ ಉತ್ತರ: ಹುಣಸೇಹಣ್ಣು
ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ ಉತ್ತರ: ಬಾಳೆಲೆ
ಆಟಸಾಗರದಂಥ ಮರ, ಎಲೆನಾದ್ರೂ ಎಣಿಸಬಹುದು, ಕಾಯಿ ಎಣಿಸೋಕಾಗಲ್ಲ, ಫಲ ನೋಡಿದ್ರೆ ನಿಂಬೆಹಣ್ಣಿನ ಗಾತ್ರ, ಒಳಗೆ ಕೂತದೆ ಕೆಂಬೂತ ಉತ್ತರ: ಕಲ್ಲತ್ತಿ ಕಾಯಿ ಸೀಬೆ
ಆಡಿ ಓಡಾಡೋ ಗಾಡಿಗೆ, ಆರಡಿ ನೆಲವಷ್ಟೇ ಸ್ವಂತ ಉತ್ತರ: ದೇಹ, ಸ್ಮಶಾನ
ಆನೆ ಬೆಂದರೂ ಆನೆ ತೊಡೆ ಬೇಯೋಲ್ಲ. ಉತ್ತರ: ತೆಂಗಿನ ಕಾಯಿ
ಆರು ಕಾಲ ಅಪ್ಪಣ್ಣ ಕುಂತು ಮೀಸೆ ತಿರುವಣ್ಣ ಅಲ್ಲಿಂದಲ್ಲಿಗೆ ಹಾರಣ್ಣ. ಉತ್ತರ: ಜಿರಲೆ
ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ ಉತ್ತರ: ನುಸಿ
ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ ಉತ್ತರ: ನೊಣ
ಆರು ಕಾಲು ಅಪ್ಪಣ್ಣ ಕೆರೆ ಬೋರಣ್ಣ ಕೂತುತಾವು ಮೀಸೆ ತಿರುವಣ್ಣ ಉತ್ತರ: ಜಿರಲೆ/Cockroach
ಆರು ಗೆರೆವುಂಟು, ಈರೆಕಾಯಲ್ಲ! ಹುಳಿವುಂಟು, ಹುಣಸೆ ಅಲ್ಲ! ಹಳದಿವುಂಟು, ನಿಂಬೆ ಹಣ್ಣಲ್ಲ ಉತ್ತರ: ನೆಲ್ಲಿಕಾಯಿ
ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ ಉತ್ತರ: ಆಕಾಶ
ಇದ್ದಲು ನುಂಗುತ್ತ, ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು? ಉತ್ತರ: ರೈಲು
ಉದ್ದ ಮರದಲ್ಲಿ ಕೆಂಪು ಸನ್ಯಾಸಿ ಉತ್ತರ: ಅಡಿಕೆ ಕಾಯಿ
ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ ಉತ್ತರ: ಗಡಿಯಾರ
ಊಟಕ್ಕೆ ಮೊದಲು ನಾನು ಅಂತ ಬರುತ್ತೆ ಉತ್ತರ: ಬಾಳೆ ಎಲೆ, ತಟ್ಟೆ
ಊರಲ್ಲೆಲ್ಲಾ ಓಡಾಡತ್ತೆ ಕಾಲಲ್ಲಿ ಎಲ್ಲರನ್ನ ಮುಟ್ಟುತ್ತೆ ಕೈಯಿಲ್ಲ. ಉತ್ತರ: ಗಾಳಿ
ಊರಿಗೆಲ್ಲ ಒಂದೇ ಕಂಬಳಿ ಉತ್ತರ: ಆಕಾಶ
ಊರಿಗೆಲ್ಲ ಒಂದೇ ಕಂಬ್ಳಿ ಉತ್ತರ: ಆಕಾಶ
ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು ಉತ್ತರ: ಒಂದರಿ
ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ ಉತ್ತರ: ಭೂಪಟ.
ಊರುಂಟು ಜನರಿಲ್ಲ! ನದಿಯುಂಟು ನೀರಿಲ್ಲ! ರಸ್ತೆಯುಂಟು ವಾಹನವಿಲ್ಲ! ಹಾಗಾದರೆ ನಾನ್ಯಾರು? ಉತ್ತರ: ಭೂಪಟ
ಊರೆಲ್ಲಾ ಅಲೆಯೋದು ಬಾಗಿಲ ಸಂದೀಲಿ ಕೂರೋದು ಯಾರಿದು. ಉತ್ತರ: ಪಾದರಕ್ಷೆ
ಊರೆಲ್ಲಾ ಸುತ್ತುತ್ತೆ ಮೂಲೆಲ್ ಬಂದು ನಿಲ್ಲುತ್ತೆ. ಉತ್ತರ: ಕುಡುಗೋಲು
ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು? ಉತ್ತರ: ಸಾಲಿಗ್ರಾಮ
ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ ಉತ್ತರ: ಬಾಯಿ
ಎರಡು ಗವಿಗಳಿಗೆ ಒಂದೇ ಗೋಡೆ ಉತ್ತರ: ಮೂಗು
ಎರಡು ಬಾವಿಗಳ ನಡುವೆಯೊಂದು ಸೇತುವೆ ಉತ್ತರ: ಮೂಗು
ಎರಡು ಮನೆಗೆ ಒಂದೇ ದೂಲ ಉತ್ತರ: ಮೂಗು
ಎರೆಮಣ್ಣು ಎರೆಮಣ್ಣು ಹೆಂಟ್ಯಾಡ ಹೂ ಜೋತಾಡ ಕಾಯಿ ನೇತಾಡ. ಉತ್ತರ: ಕಡಲೆಕಾಯಿ ಗಿಡ
ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ ಉತ್ತರ: ಗಿಳಿ
ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ ಉತ್ತರ: ಜರಡಿ
ಎಲ್ಲರಿಗೂ ಬೇಕಾಗಿರೋ ಅಜ್ಜಿ ಅವಳ ಮೈ ತುಂಬಾ ಬರಿಕಜ್ಜಿ. ಉತ್ತರ: ಹಾಗಲಕಾಯಿ
ಐದು ಮನೆಗೆ ಒಂದೇ ಅಂಗಳ ಉತ್ತರ: ಅಂಗ್ಯ
ಒಂಟಿಕಾಲಿನ ಕುಂಟ. ನಾನ್ಯಾರು? ಉತ್ತರ: ಬುಗರಿ
ಒಂದು ಕಂಬ, ಅದಕ್ಕೆ ನಾಲ್ಕು ಕಿವಿಗಳು, ಅದರ ಮೆಲೊಂದು ಗುಂಡು ಉತ್ತರ: ಲವಂಗ
ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ ಉತ್ತರ: ಜೋಳದ ದಂಟು
ಒಂದು ಕುಂಟೆ ರಾಗಿ ಒಬ್ಬನೇ ತಿನ್ನುತ್ತಾನೆ ಉತ್ತರ: ಗಿರಣಿ/ಬೀಸೋಕಲ್ಲು
ಒಂದು ಕೆರೆಗೆ ನಾಲ್ಕು ತೂಬು ರಾತ್ರಿಯೆಲ್ಲಾ ತುಂಬಿಕೊತವೆ ಬೆಳಗಾಗ್ತಿದ್ದಂಗೆ ಖಾಲಿಯಾಗ್ತವೆ. ಉತ್ತರ: ಹಸುವಿನ ಕೆಚ್ಚಲು
ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು. ಉತ್ತರ: ಬದನೆಕಾಯಿ.
ಒಂದು ಗುಂಡೀಲಿ ಒಂದೇ ಮೀನು. ಉತ್ತರ: ಹುತ್ತ
ಒಂದು ತೇಲುತ್ತೆ, ಒಂದು ಮುಳುಗುತ್ತೆ, ಒಂದು ಕರಗುತ್ತೆ. ಉತ್ತರ: ವಾರ, ತಿಂಗಳು, ವರ್ಷ
ಒಂದು ಬತ್ತಿ ಮನೆಯೆಲ್ಲ ಬೆಳಕು ಉತ್ತರ: ಸೂರ್ಯ
ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ ಉತ್ತರ: ತೆಂಗಿನ ಕಾಯಿ
ಒಂದು ಮನೆಗೆ ಒಂದೇ ತೊಲೆ ಉತ್ತರ: ತಲೆ
ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ. ಉತ್ತರ: ಜಾದಳಕಾಯಿ
ಒಂದು ಮರ ಕವಲೊಡೆದ್ದು ಎರಡು ಭಾಗಗಳಾಗಿ 15-ಬಿಳಿಎಲೆ 15-ಕರಿಎಲೆ ಉತ್ತರ:
ಒಂದು ಮರ, ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ ಉತ್ತರ: ಆಕಾಶ ನಕ್ಷತ್ರ ಚಂದ್ರ
ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ. ಉತ್ತರ: ದಾರಿ
ಒಂದು ಸುಣ್ಣದ ಗೋಡೆಗೆ, ಒಂದೂ ಬಾಗಿಲಿಲ್ಲ ಉತ್ತರ: ಕೋಳಿ ಮೊಟ್ಟೆ
ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ ಉತ್ತರ: ವರ್ಷ
ಒಂದು ಹಪ್ಪಳ ಊರಿಗೆಲ್ಲ ಊಟ ಉತ್ತರ: ಚಂದ್ರ
ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ: ಬಾಳೆ ಗೊನೆ/Banana fruit branch
ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ: ಬಾಳೆಗೊನೆ
ಒಂದೇ ಕುಪ್ಪಿಲಿ, ಎರಡು ತರಾ ತುಪ್ಪ ಉತ್ತರ: ಮೊಟ್ಟೆ
ಒಂದೇ ಕೆರೆಯ ಎರಡು ತೂಗು. ಉತ್ತರ: ಮೂಗು
ಒಂಬತ್ತು ತಿಂಗಳು ಒಳಗಡೆ ವಾಸ ಹೊರ ಕುಡಿಯಲು ಎರಡು ಬಂದವನು ಒಬ್ಬ ಬಂದಾಗ ಕುಡಿಯುವುದು ಯಾವುದು. ಉತ್ತರ: ಗರ್ಭ, ಹೆರಿಗೆ, ಮಗು, ಮೊಲೆ
ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ ಉತ್ತರ: ರೊಟ್ಟಿ
ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ. ಉತ್ತರ: ಅನ್ನದ ಅಗುಳು.
ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು, ಒಬ್ಬಳು ತೇಲಿದಳು ಉತ್ತರ: ಅಡಿಕೆ, ಸುಣ್ಣ
ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ ಉತ್ತರ: ನಿಂಬೆಹಣ್ಣು
ಕಚ್ಚಿದಡುರಿವುದು | ಕಿಚ್ಚಲ್ಲ ಕಾಣರೇ ಅಚ್ಚರಿಯಲ್ಲ ಅರಿದಲ್ಲ ಈ ಮಾತು ನಿಶ್ಚಯಂ ಬಲ್ಲೆ! ಸರ್ವಜ್ಞ!. ಉತ್ತರ: ಮೆಣಸು
ಕಚ್ಚಿದರೆ ಮಾತ್ರ ಕಚ್ಚುವುದು! ಕಚ್ಚಲ್ಲ, ಹಾವಲ್ಲ, ಚೇಳಲ್ಲ ಉತ್ತರ: ಮೆಣಸಿನ ಕಾಯಿ
ಕಡಿದರೆ ಕಚ್ಚೋಕೆ ಆಗೋಲ್ಲ, ಹಿಡದ್ರೆ ಮುಟ್ಟೋಕೆ ಸಿಗೋಲ್ಲ ಉತ್ತರ: ನೀರು
ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ ಉತ್ತರ: ಹಲ್ಲುಪುಡಿ
ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ. ಉತ್ತರ: ಹಲ್ಲುಪುಡಿ.
ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ ಉತ್ತರ: ಗಾಳಿ
ಕಣ್ಣಿಗೆ ಕಾಣೋದಿಲ್ಲ! ಕೈಯಿಗೆ ಸಿಗೋದಿಲ್ಲ ಉತ್ತರ: ಗಾಳಿ
ಕಣ್ಣಿಗೆ ಹತ್ತಿರ ಕಾಲಿಗೆ ದೂರ ಉತ್ತರ: ಬೆಟ್ಟ
ಕಣ್ಣಿಗೆ ಹತ್ತಿರ, ಕಾಲಿಗೆ ದೂರ ಉತ್ತರ: ದಿಗಂತ
ಕಣ್ಣಿಲ್ಲ, ಕಾಲಿಲ್ಲ, ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ. ಉತ್ತರ: ನದಿ
ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ ಉತ್ತರ: ತಂಬೂರಿ
ಕತ್ತಲೆ ಮನೆಯಲ್ಲಿ ಕಂಬ ಬಿದ್ದರೆ, ನಿಮ್ಮಪ್ಪನೂ ಎತ್ತಲಾರ, ನಮ್ಮಪ್ಪನೂ ಎತ್ತಲಾರ ಉತ್ತರ: ಸೂಜಿ
ಕತ್ತೆ ಇಲ್ಲದ ಕೆರೆಯಲ್ಲಿ ತಟ್ಟೆ ತೇಲಿ ಬರುತ್ತದೆ ಉತ್ತರ: ಆಕಾಶದಲ್ಲಿ ಚಂದ್ರ
ಕಂದ ಬಂದ ಕೊಂದ ತಂದ ಉತ್ತರ: ಶ್ರೀ ರಾಮ ಚಂದ್ರ
ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ ಉತ್ತರ: ಇಲಿ
ಕಪ್ಪುಂಟು ಕಸ್ತೂರಿಯಲ್ಲ, ಬಿಳ್ಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ, ರೆಕ್ಕೆಯುಂಟು ಪಕ್ಷಿಯಲ್ಲ. ಉತ್ತರ: ಕಣ್ಣು
ಕಪ್ಪೆ ಮುಟ್ಟದ ಕೈಲಾಸದ ನೀರು ಉತ್ತರ: ಎಳೆ ನೀರು
ಕಪ್ಪೆ ಮುಟ್ಟದ ಕೈಲಾಸದ ನೀರು ಉತ್ತರ: ಎಳೆನೀರು
ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ. ಉತ್ತರ: ಕಣ್ಣು.
ಕರವುಂಟು ಕಾಲಿಲ್ಲ | ಶಿರಹರಿದಮುಂಡಾವದು ನರದಿ ಬಿಗಿದಾರು ತುಂಡದಕೆ ಕವಿಗಳಿಗೆ ಅರಿದರಿದ ಪೇಳಿ ಸರ್ವಜ್ಞ ಉತ್ತರ: ಹೊಲಿದ ಅಂಗಿ,ಕೋಟು
ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು? ಉತ್ತರ: ಹೆಗ್ಗಣ
ಕರಿ ಗುಡ್ಡ; ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ. ಉತ್ತರ: ಗಡಿಗೆಮಜ್ಜಿಗೆ.
ಕರಿ ಗುಡ್ಡಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ ಉತ್ತರ: ಗಡಿಗೆ ಮಜ್ಜಿಗೆ
ಕರಿ ಮಂಚದ ಮೇಲೆ, ಹಾಕುವ ಹಾಸಿಗೆ, ತೆಗೆಯುವ ಹಾಸಿಗೆ ಉತ್ತರ: ಕಾವಲಿ ದೋಸೆ
ಕರಿ ಸೀರಿ ಉಟ್ಟಾಳ, ಕಾಲುಂಗುರ ಇಟ್ಟಾಳ, ಮೇಲೆ ಹೋಗತಾಳ, ಕೆಳಗೆ ಬರತಾಳ ಉತ್ತರ: ಒನಕೆ
ಕರಿ ಸೀರೆ ಉಟ್ಟವಳೆ ಕಾಲುಂಗುರ ತೊಟ್ಟವಳೆ ಮೇಲೆ ಕೆಳಗೆ ಜಿಗಿದಾಡ್ತಾಳೆ. ಉತ್ತರ: ಒನಕೆ
ಕರಿ ಹುಡುಗನಿಗೆ ಬಿಳಿ ಟೋಪಿ ಉತ್ತರ: ಹೆಂಡದ ಮಡಿಕೆ
ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ ಉತ್ತರ: ಬೈತಲೆ
ಕರಿತಲೆಯವನಿಗೆ ಬಿಳಿ ಕಾಲು. ಉತ್ತರ: ಬೆಂಕಿ ಕಡ್ಡಿ
ಕರಿಸ್ಯಾಲೆ ಗರತಿ ಕರೆದ್ರೂ ಮಾತಾಡೋಲ್ಲ ಹಿಡಿದ್ರೂ ಸಿಗೋಲ್ಲ. ಉತ್ತರ: ಹೇನು
ಕಲ್ಲನ್ನು ತುಳಿಯುತ್ತೆ! ಮುಳ್ಳನ್ನು ಮೂಯುತ್ತೆ! ನೀರು ಕಂಡ್ರೆ ನಿಲ್ಲುತ್ತೆ ಉತ್ತರ: ಚಪ್ಪಲಿ
ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ; ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ; ಬಲ್ಲವರು ಹೇಳಿ ಸರ್ವಜ್ಞ” ಉತ್ತರ: ಸುಣ್ಣದ ಕಲ್ಲು
ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ ಉತ್ತರ: ಸುಣ್ಣ
ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ ಉತ್ತರ: ಸುಣ್ಣ
ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು ಉತ್ತರ: ಸುಣ್ಣ
ಕಲ್ಲಿನ ಮೇಲೆ ಕುಣಿಯುತ್ತೆ ಬೇಲಿಯ ಮೇಲೆ ಮಲಗುತ್ತೆ ಉತ್ತರ: ಒಗೆದ ಬಟ್ಟೆ
ಕಲ್ಲಿನ ರೂಪದಲ್ಲಿದ್ದರೆ ಹಾಕುವರು ಹಾಲು ನಿಜಬೂದಿ ಬಂದರೆ ತೆಗೆವರು ಕೋಲು, ಉತ್ತರ: ಹಾವು
ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ ಉತ್ತರ: ಭೂಪಟ
ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ. ಉತ್ತರ: ಗಿರಣಿ
ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ ಉತ್ತರ: ಚಪ್ಪಲಿ
ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು ಉತ್ತರ: ಶ್ರೀಗಂಧ
ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ ಉತ್ತರ: ದೀಪ
ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ ಉತ್ತರ: ಸೂಜಿ
ಕಾಲಿಲ್ಲದ ಪೋರಿಗೆ ಮಾರುದ್ದದ ಮೂಗುದಾರ. ಉತ್ತರ: ಸೂಜಿ
ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು ಉತ್ತರ: ನದಿ
ಕಾಲಿಲ್ಲದೆ ನಡೆಯುವುದು, ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು ಉತ್ತರ: ನದಿ
ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು ಉತ್ತರ: ನದಿ
ಕಾಲುಂಟು ಕೈಯಿಲ್ಲ ನಡುವುಂಟು ತಲೆಯಿಲ್ಲ ನೂರಾರು ಜನರು ನನ್ನ ಧರಿಸಿರುವುದುಂಟು. ಉತ್ತರ: ಪ್ಯಾಂಟು
ಕಾಲುಂಟು ಕೈಯಿಲ್ಲ! ನಡುವುಂಟು ತಲೆಯಿಲ್ಲ! ರಂಧ್ರಗಳ್ಳುಂಟು ಉತ್ತರ: ಪ್ಯಾಂಟು
ಕಾಸಿನ ಕುದುರೆಗೆ ಬಾಲದ ಲಗಾಮು ಉತ್ತರ: ಸೂಜಿ ದಾರ
ಕಿರಿ ಮನೆಗೆ ಚಿನ್ನದ ಬೀಗ ಉತ್ತರ: ಮೂಗುತಿ/Nose-stud
ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ ಉತ್ತರ: ಕೋಳಿ
ಕಿರೀಟವಿದ್ರೂ ರಾಜನಲ್ಲ ಸಮಯ ತಿಳಿಸಿದ್ರೂ ಗಡಿಯಾರವಲ್ಲ. ಉತ್ತರ: ಕೋಳಿಹುಂಜ
ಕಿರೀಟವುಂಟು ರಾಜನಲ್ಲ, ಗಡ್ಡವುಂಟು ತುರುಕನಲ್ಲ ಉತ್ತರ: ಹುಂಜ
ಕುಡಿಕೆಯಲ್ಲಿ ಮೆಣಸು ಉತ್ತರ: ಪರಂಗಿ ಹಣ್ಣು
ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ. ಉತ್ತರ: ಅಂಗಿ.
ಕುತ್ತಿಗೆಗೆ ಹಾಕಿದರೆ ಬರುತ್ತೆ, ಇಲ್ಲದಿದ್ದರೆ ಇಲ್ಲ ಉತ್ತರ: ಬಿಂದಿಗೆ
ಕುದುರೆ ಬಾಲದಿಂದ ನೀರು ಕುಡಿಯುತ್ತದೆ ಉತ್ತರ: ಹೇನು
ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ ಉತ್ತರ: ಕಪ್ಪೆ
ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುಸಿ ಉತ್ತರ: ಕಪ್ಪೆ
ಕೆಂದ ಕುದುರೆ, ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ ಉತ್ತರ: ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ ಉತ್ತರ: ರೊಟ್ಟಿ
ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ. ಉತ್ತರ: ರೊಟ್ಟಿ, ದೋಸೆ
ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ ಉತ್ತರ: ರೊಟ್ಟಿ, ದೋಸೆ
ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ, ಇನ್ನೊಬ್ಬ ಇಳಿತಾನೇ ಉತ್ತರ: ಬೆಂಕಿ, ಬಾಣಲೆ, ದೋಸೆ
ಕೆಂಪು ಹೆಣ್ಣಿನ ತುಟಿ ಕರೀಗಿದೆ ಉತ್ತರ: ಗುಲಗಂಜಿ/Indian Licorice
ಕೈ ಇದ್ದೋನಿಗೆ ಕಾಲು ಇರಲ್ಲ, ಕಾಲು ಇದ್ದೋನಿಗೆ ಕೈ ಇರಲ್ಲ ಉತ್ತರ: ಅಂಗಿ/ಪೈಜಾಮ
ಕೈನ ಒಬ್ಬರಿಗೆ ಕೊಡುತ್ತೆ, ಕಾಲು ಇನ್ನೊಬ್ಬರಿಗೆ ಕೊಡುತ್ತೆ ಮತ್ತು ದೇಹವನ್ನ ಬೇರೊಬ್ಬರಿಗೆ ಕೊಡುತ್ತೆ ಏನು? ಉತ್ತರ:
ಕೈಯಿಲ್ಲ, ಕಾಲಿಲ್ಲ; ಹೆಸರಿಲ್ಲ, ಕುಲ ಇಲ್ಲ; ಅಂದ್ರೂ ಮನೆ ಬಿಟ್ಟು ಓಡ್ತಾನೆ; ಹಿಡಿಯಾಕ ಮಾತ್ರ ಆಗಲ್ಲ. ಉತ್ತರ: ಸಾವು
ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ ಉತ್ತರ: ಕಸಪೊರಕೆ
ಕೊಳದ ಒಳಗೆ ಒಂದು ಮರ ಹುಟ್ಟಿ, ಬೇರು ಇಲ್ಲ, ನೀರು ಇಲ್ಲ. ಉತ್ತರ: ಎಣ್ಣೆ ದೀಪ.
ಕ್ಷಮೆಗೆ ಮತ್ತೊಂದು ಹೆಸರೇ... ಉತ್ತರ: ತಾಯಿ
ಗಂಗೆ ಧರಿಸಿರುವ ಗಂಗಾಧರನಲ್ಲ ಮೂರು ಕಣ್ಣುಂಟು ಮುಕ್ಕಣ್ಣನಲ್ಲ ಬೂಧಿ ತೊಡಾದಿರುವ ವಿಭೂತಿ ಪುರುಷನಲ್ಲ ಹಾಗಾದರೆ ನಾನು ಯಾರು. ಉತ್ತರ: ತೆಂಗಿನಕಾಯಿ
ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, "Paper" ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ ಅಲ್ಲ ಉತ್ತರ: ಕಂಡಕ್ಟರ್
ಗರಿಕೆ ಆಸೆ ದೇವರು! ವರ್ಶಕ್ಕೊಮ್ಮೆ ಬರ್ತಾನೆ ಉತ್ತರ: ಗಣಪತಿ
ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು ಉತ್ತರ: ಉಪ್ಪು
ಗಿಡದಲ್ಲಿ ಹುಟ್ಟುತ್ತೆ ಗಿಡದಲ್ಲಿ ಬೆಳೆಯುತ್ತೆ ಶಾಸ್ತ್ರಕ್ಕೆ ಮೊದಲಾಗಿ ಬರುತ್ತೆ. ಉತ್ತರ: ಸೀಗೆ
ಗಿರ ಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ. ಉತ್ತರ: ಬುಗುರಿ
ಗಿರಿರಾಜನ ಮಗಳ ಗಂಡನ ಹಿರಿ ಮಗನ ತಮ್ಮನ ವಾಹನದ ವೈರಿ ಉತ್ತರ: ನಾಯಿ
ಗುಂಡಮ್ಮನ್ನ ಸೀಳಿದ್ರೆ ಹೊಟ್ಟೆ ತುಂಬಾ ಮಕ್ಕಳು. ಉತ್ತರ: ಕಿತ್ತಲೆ
ಗುಂಡಾಕಾರ ಮೈಯೆಲ್ಲಾ ತೂತು ಉತ್ತರ: ದೋಸೆ
ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು ಉತ್ತರ: ನವಿಲು
ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು. ಉತ್ತರ: ನವಿಲು.
ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ ಉತ್ತರ: ಕಣ್ಣು
ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ ಉತ್ತರ: ಕಣ್ಣು
ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ. ಉತ್ತರ: ತಿಗಣೆ
ಗೋಡೆ ಮೇಲೆ ಕರೀ ರೊಟ್ಟಿ ಉತ್ತರ: ಬೆರಣಿ/Cow-dung Cake
ಚಂದ್ರ ಬಿಂಬವ ಹೋಲುವುದು ಎಲ್ಲರ ಮನ ಸೆಳೆಯುವುದು ಕಂಡರೆ ಬಾಯಲ್ಲಿ ನೀರೂರುವುದು ಸುಟ್ಟರೆ ಬಲು ರುಚಿಯೆನಿಸುವುದು. ಉತ್ತರ: ಹಪ್ಪಳ
ಚಂದ್ರನಂತೆ ಗುಂಡಾಗಿ ಎಲೆಗಿಂತಲೂ ತೆಳುವಾಗಿ, ತಿಂದರೆ ಬಲು ರುಚಿ ಉತ್ತರ: ಹಪ್ಪಳ/Pappad
ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ. ಉತ್ತರ: ಗರಗಸ.
ಚಿಕ್ಕ ಚಿಕ್ಕ ಪೆಟ್ಟಿಗೆ, ಚಿನ್ನದ ಪೆಟ್ಟಿಗೆ, ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ ಉತ್ತರ: ದಾಳಿಂಬೆ ಹಣ್ಣು
ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ. ಉತ್ತರ: ಕುಂಕುಮ
ಚಿಕ್ಕ ಬೋರನ ಬಗಲಲ್ಲಿ ಕತ್ತಿ ಉತ್ತರ: ಹುರುಳಿಕಾಯಿ
ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ ಉತ್ತರ: ಹುರಳಿಕಾಯಿ
ಚಿಕ್ಕ ಮನೆ ತುಂಬಾ ಬೆಳ್ಳಿ ಚಕ್ಕೆ ತುಂಬಿದ್ದಾರೆ. ಉತ್ತರ: ಬಾಯಿಯಲ್ಲಿನ ಹೊಳೆಯುವ ಹಲ್ಲುಗಳು
ಚಿಕ್ಕ ಮನೆಗೆ ಚಿನ್ನದ ಬೀಗ ಉತ್ತರ: ಮೂಗುತಿ
ಚಿಕ್ಕ ಮನೇಲಿ ಚಕ್ಕೆ ತುಂಬಿವೆ ಉತ್ತರ: ಹಲ್ಲು
ಚಿಕ್ಕಕ್ಕನಿಗೆ ಪುಕ್ಕುದ್ದ ಉತ್ತರ: ಸೌಟು
ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ ಉತ್ತರ: ಗಡಿಯಾರ
ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ ಉತ್ತರ: ದೀಪ
ಚಿನ್ನ ಬಿಸಾಡುತ್ತಾರೆ! ಬೆಳ್ಳಿ ತಿಂತಾರೆ ಉತ್ತರ: ಬಾಳೆ ಹಣ್ಣು
ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ ಉತ್ತರ: ಬಾಳೆ ಹಣ್ಣು
ಚಿನ್ನದ ಹಕ್ಕಿ ಬಾಲದಿಂದ ನೀರು ಕುಡಿಯುತ್ತದೆ? ಉತ್ತರ: ಹಣತೆ
ಚಿಪ್ಪುಂಟು ಅಮೆಯಲ್ಲ, ಜುಟ್ಟುನಂಟು ಪೂಜಾರಿಯಲ್ಲ. ಮೂರು ಕಣ್ಣುನಂಟು ಹರನಲ್ಲ, ಹಾಗಾದರೆ ನಾನು ಯಾರು? ಉತ್ತರ: ತೆಂಗಿನಕಾಯಿ
ಚೆಲ್ಲೋದುಂಟು, ಕುಯ್ಯೋದುಂಟು, ತಿನ್ನೋದಿಲ್ಲ ಉತ್ತರ: ಕೂದಲು
ಚೋಟುದ್ದ ಹುಡುಗಿಗೆ ಮಾರುದ್ದ ಜಡೆ ಉತ್ತರ: ಸೂಜಿ ದಾರ
ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ ಉತ್ತರ: ಮೇಡು
ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ. ಉತ್ತರ: ಸಗಣಿ.
ತಂದವರೊಬ್ಬರು! ಹಿಡಿದವರೊಬ್ಬರು! ಹೊತ್ತವರೊಬ್ಬರು ಉತ್ತರ: ಬಳೆ
ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು ಉತ್ತರ: ತೆಂಗಿನ ಕಾಯಿ
ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ ಉತ್ತರ: ಕೋಟು ಅಂಗಿ
ತಲೆ ಮೇಲೆ ಹರಳು, ಬಾಯಲ್ಲಿ ಬೆರಳು ಉತ್ತರ: ಉಂಗುರ
ತಾಯಿಗೆ ಮೂರು ಬಣ್ಣ, ಮಗಳಿಗೆ ಎರಡು ಬಣ್ಣ; ಇದೆಂತಹ ವಿಚಿತ್ರ? ತಾಯಿಗೇ ಬಣ್ಣ ಹೆಚ್ಚು ದೇಶಭಕ್ತರೆ, ಉತ್ತರ ಹೇಳಿ. ಉತ್ತರ: ನಮ್ಮ ರಾಷ್ಟ್ರಧ್ವಜ ಮತ್ತು ರಾಜ್ಯ ಧ್ವಜ
ತಿಂಡಿಗೆ ಕಡಿಮೆ ಇಲ್ಲ, ತೀರ್ಥ ಕುಡಿದರೆ ಸಾವು ಉತ್ತರ: ವಿಷ
ತೂತಿಲ್ಲದ ಒಡವೆ ಉತ್ತರ: ಕುಂಕುಮ
ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ ಉತ್ತರ: ಸೂರ್ಯ, ಚಂದ್ರ
ನನ್ನ ಕಂಡರೆ ಎಲ್ಲರು ಓದೀತಾರೆ ಉತ್ತರ: ಚೆಂಡು
ನಾ ಇರುವಾಗ ಬರುತ್ತೆ, ನಾ ಹೋದ ಮೇಲೂ ಇರುತ್ತೆ ಉತ್ತರ: ಕೀರ್ತಿ
ನಾಟ್ಯದವನಿಗೆ ಮೈಯೆಲ್ಲಾ ಕಣ್ಣು. ಉತ್ತರ: ನವಿಲು
ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ. ಉತ್ತರ: ನೀರು
ನಾರಾಯಣ ಕಟ್ಟಿಸಿದ, ನಾಲ್ಕು ಮೂಲೆ ಬಾವಿ, ನೀರಿಲ್ಲ, ಮೀನಿಲ್ಲ ಉತ್ತರ: ಬೆಲ್ಲದ ಅಚ್ಚು
ನಾಲಿಗೆಯುಂಟು, ಮಾತಾಡುವುದಿಲ್ಲ! ಮುಳ್ಳುಂಟು, ಪೊದೆಯಲ್ಲ ಉತ್ತರ: ಪೆನ್ನು
ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು? ಉತ್ತರ: ಆನೆ
ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ! ಬೆನ್ನು ತೋಳುಂಟು ಮನುಷ್ಯನಲ್ಲ ಉತ್ತರ: ಕುರ್ಚಿ
ನಾಲ್ಕು ಕಾಲುಂಟ್ಟು ಮೃಗವಲ್ಲ, ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ ಉತ್ತರ: ತೊಟ್ಟಿಲು
ನಿಂಗಕ್ಕ ನೀರಕ್ಕ, ಹಾಕುವವರುಂಟು ತೆಗೆಯುವವರಿಲ್ಲ, ಅದೇನಕ್ಕ? ಉತ್ತರ: ಹಚ್ಚೆ/Tattoo
ನಿನ್ನ ಹೊಟ್ಟೆಯ ಮೇಲೆ, ನನ್ನ ಹೊಟ್ಟೆ ಉತ್ತರ: ರಾಗಿ ಕಲ್ಲು
ನೀನಿಲ್ಲದೆ ಊಟವಿಲ್ಲ ಉತ್ತರ: ಉಪ್ಪು
ನೀರನ್ನೇ ಸೇರುತ್ತೆ ನೀರಿನಲ್ಲಿ ಬೆಳೆಯುತ್ತೆ ನೀರು ಕಂಡರೆ ಹೆದರುತ್ತೆ ಕಣ್ಣಿಗೆ ಕಾಣದೆ ಹೋಗುತ್ತೆ. ಉತ್ತರ: ಉಪ್ಪು
ನೀರಲ್ಲೆ ಹುಟ್ಟುತ್ತೆ! ನೀರಲ್ಲೆ ಬೆಳೆಯುತ್ತೆ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ ಉತ್ತರ: ಉಪ್ಪು
ನೀರಿನಲ್ಲಿ ಹಾಕಿದರೆ ಮುಳುಗುವುದಿಲ್ಲ! ಬೆಂಕಿಯಲ್ಲಿ ಸುಡುವುದಿಲ್ಲ, ಕಲ್ಲಲ್ಲ! ಇದು ಇಲ್ಲದವರಿಲ್ಲ ಉತ್ತರ: ನೆರಳು
ನೀರಿನಲ್ಲೇ ಹುಟ್ಟಿ ನೀರಿನಲ್ಲೇ ಬೆಳೆದು ಊರಿಗೆ ಒಂದು ಗಂಟಲು ಹರಿಯುವಂತೆ ಕೂಗುವ ನಾನು ಯಾರು, ಉತ್ತರ: ಶಂಖ
ನೀರಿರೋತಾವ ನಿಲ್ಲಲೇ ಕೋಣ ಉತ್ತರ: ಚಪ್ಪಲಿ
ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ? ಉತ್ತರ: ನಕ್ಷೆ
ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ ಉತ್ತರ: ಕಣ್ಣು.
ನೀರುಂಟ್ಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ ಉತ್ತರ: ತೆಂಗಿನಕಾಯಿ
ನೀಲಿ ಕೆರೆಯಲಿ ಬಿಳಿ ಮೀನು ಉತ್ತರ: ನಕ್ಷತ್ರ
ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು? ಉತ್ತರ: ತಾರೆಗಳು
ನೆತ್ತಿಯಲ್ಲಿ ಉಣ್ಣುವುದು, ಸುತ್ತಲೂ ಸುರಿಸುವುದು, ಎತ್ತಿದರೆ ಎರಡು ಹೋಳಾಗುವುದು ಉತ್ತರ: ರಾಗಿಕಲ್ಲು
ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು. ಉತ್ತರ: ಸುಣ್ಣ
ನೋಡಿದರೆ ತರತರದ ಬಣ್ಣ ಉಜ್ಜಿದರೆ ಒಂದೇ ಬಣ್ಣ. ಉತ್ತರ: ಸಾಬೂನು
ನೋಡಿದರೆ ನೋಟಗಳು, ನಕ್ಕರೆ ನಗುಗಳು, ಒಡೆದರೆ ತುಂಡುಗಳು. ಉತ್ತರ: ಕನ್ನಡಿ
ನೋಡಿದರೆ ಮಲ್ಲಿಗೆ ಹೂ, ಕೈಲಿ ತಕ್ಕಂಡು ಮುಟ್ಟೋಕ್ಕೆ ಆಗೋದಿಲ್ಲ ಉತ್ತರ: ಚುಕ್ಕಿ
ನೋಡುವುದು ಮುಂಗೈ ನುಂಗುವುದು ಹಸ್ತ. ಉತ್ತರ: ಬಳೆ
ನೋಡ್ಲಿಕೆ ಈಟುದ್ದ ಹುಡುಗ ಎಲ್ಲೆಲ್ಲೋ ಸುದ್ದಿ ಮುಟ್ಟಿಸ್ತಾನೆ. ಉತ್ತರ: ಪೋಸ್ಟ್‌ಕಾರ್ಡ್
ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ ಉತ್ತರ: ಚಿಮಿಣಿ
ಬಡ ಬಡ ಬಂದ ಅಂಗಿ ಕಳಚಿದ, ಬಾವಿಯೊಳಗೆ ಬಿದ್ದ. ಉತ್ತರ: ಬಾಳೆ ಹಣ್ಣು.
ಬಂಡೆಯ ಮೇಲೆ ಮಲಗುತ್ತೆ, ತಂತಿ ಮೇಲೆ ಕುಣಿಯತ್ತೆ ಉತ್ತರ: ಒಣಗಲು ಹಾಕಿದ ಬಟ್ಟೆ
ಬರೋದ ಕಂಡು ಕೈ ಒಡ್ತಾರೆ. ಉತ್ತರ: ಬಸ್
ಬರ್ತಾ ಇಳೀತಾನೆ ಹೋಗ್ತಾ ಏತ್ತಾನೆ. ಉತ್ತರ: ನೆರಳುಕಾಯಿ
ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ; ಹಾಗಾದರೆ ನಾನು ಯಾರು ಉತ್ತರ: ಗಾಂಧೀಜಿ
ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗೋಲ್ಲ ಉತ್ತರ: ಮಳೆ
ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ, ತಲೆಯಲ್ಲಿ ಕೂದಲಿಲ್ಲ, ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು. ಉತ್ತರ: ಸೊಳ್ಳೆ
ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು, ಇದು ಏನು? ಉತ್ತರ: ಛತ್ರಿ
ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು, ಇದನ್ನು ನೋಡಲು ಜನ ಕಾದಿಹರು ಉತ್ತರ: ನಾಣ್ಯ
ಬಿಳಿ ಕುದುರೆಗೆ ಹಸಿರು ಬಾಲ, ಕೆಂಪು ಕುದುರೆಗೂ ಹಸಿರು ಬಾಲ ಏನಿದು? ಉತ್ತರ: ಮೂಲಂಗಿ/ಕ್ಯಾರೆಟ್
ಬಿಳಿ ಕುದುರೆಗೆ ಹಸಿರು ಬಾಲ. ಉತ್ತರ: ಮೂಲಂಗಿ
ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ ಉತ್ತರ: ಕಣ್ಣು
ಬಿಳಿ ಲಂಗದ ಹುಡುಗಿ! ಎಳೆದರೆ ಬರ್ತಾಳೆ! ಬಿಟ್ಟರೆ ಓಡ್ತಾಳೆ ಉತ್ತರ: ಸಿಗರೇಟ್ ಹೊಗೆ
ಬಿಳಿ ಸರದಾರನಿಗೆ ಕರಿ ಟೋಪಿ ಉತ್ತರ: ಬೆಂಕಿಕಡ್ಡಿ
ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು. ಉತ್ತರ: ಸೀತ ಫಲ
ಬಿಳಿ ಹುಡುಗನಿಗೆ ಕರಿಟೋಪಿ ಉತ್ತರ: ಬೆಂಕಿ ಕಡ್ಡಿ
ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ ಉತ್ತರ: ನಾಲಿಗೆ
ಬಿಳಿಯ ಪೊರೆ ಬಿಡುವ ನಾಗವಲ್ಲ! ಗುಂಡಗಿರುವೆ ಗೋಲಿಯ ಗುಂಡಲ್ಲ! ದೇಹವು ಮಡಿಕೆಗಳಿಂದ ಕೂಡಿರುವುದು, ಕುಂಬಳ ಕಾಯಲ್ಲ ಉತ್ತರ: ಬೆಳ್ಳುಳ್ಳಿ
ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು ಉತ್ತರ: ಪುಸ್ತಕ ಮತ್ತು ಅಕ್ಷರಗಳು
ಬಿಳೀ ಕಲ್ಮೇಲೆ ಕರಿಕಲ್ಲು, ಕರೀ ಕಲ್ಮೇಲೆ ರಂಗೋಲೆ ಉತ್ತರ: ಕಣ್ಣು
ಬೆನ್ನಿನಿಂದ ತಿನ್ನುವುದು, ಬಾಯಿಂದ ಉಗುಳುವುದು, ಎದುರಾದವರನ್ನು ಕೊಲ್ಲುವುದು, ಹಾಗಾದರೆ ನಾನು ಯಾರು ಉತ್ತರ: ಬಂದೂಕ
ಬೆಳಗ್ಗೆ 4 ಕಣ್ಣು, ಮಧ್ಯಾಹ್ನ 8 ಕಣ್ಣು, ರಾತ್ರಿ 12 ಕಣ್ಣು ಉತ್ತರ:
ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು ಉತ್ತರ: ತಾರೆ
ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ ಉತ್ತರ: ಕಣ್ಣು
ಬೇಲಿ ನುಗ್ಗೋ ನಾಯಿಗೆ ತಿಕದಲ್ಲಿ ಜನಿವಾರ ಉತ್ತರ: ಸೂಜಿ
ಮಡಿಸಿದರೆ ಮೊಗ್ಗು! ಬಿಡಿಸಿದರೆ ಹೂವು! ಪರಿಮಳವಿಲ್ಲ ವಾಸ್ನೆ ಇಲ್ಲ ಉತ್ತರ: ಕೊಡೆ
ಮಣ್ಣಿನಲ್ಲಿ ಹುಟ್ಟಿ, ಮಣ್ಣಿನಲ್ಲಿ ಬೆಳೆದು, ಮಣ್ಣಿನಲ್ಲಿ ಸಾಯುವುದು ಉತ್ತರ: ಮಡಿಕೆ/Mud-pot
ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು ಉತ್ತರ: ತೆಂಗಿನಕಾಯಿ
ಮನೆ ಮುಂದೆ ಮಂಡಲ ಹಾವು ನೇತಾಕ್ಕೊಂಡೈತೆ. ಉತ್ತರ: ಪಡುವಲಕಾಯಿ
ಮನೆ ಮೇಲೆ ಮಲ್ಲಿಗೆ ಹೂವು. ಉತ್ತರ: ಮಂಜು
ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ, ಮುಚ್ಚಿದರೆ ಹಾನಿ ಇದೇನು? ಉತ್ತರ: ಮೂಗು, ಬಾಯಿ
ಮರದ ಮೇಲಿರುವೆ ಪಕ್ಷಿಯಲ್ಲ; ಹಸಿರು ಅಂಗಿ ತೊಟ್ಟಿರುವೆ ಬಾಲಕನಲ್ಲ; ಕೆಂಪು ಮೋತಿ ಇದೆ ಗಿಳಿಯಲ್ಲ ಉತ್ತರ:
ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ ಉತ್ತರ: ಮನುಷ್ಯನ ಹುಟ್ಟು ಮಗು
ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ ಉತ್ತರ: ಗಾಣ
ಮಳೆ ಹುಯ್ಲಿ, ಹುಯ್ದೆ ಇರ್ಲಿ ಬಾಯಲ್ಲಾ ಕೆಂಪು, ಮೈಯೆಲ್ಲಾ ಹಸಿರು ಉತ್ತರ: ಗಿಳಿ
ಮಾತನಾಡುವಾಗ ಮೂವತ್ತೆರಡು ಕವಡಿ ಕಾಣಿಸುತ್ತಾವಾ ತಗೋಬೇಕೆಂದರೆ ಬರೋಲ್ಲ. ಉತ್ತರ: ಹಲ್ಲು
ಮಿಣಿ ಮಿಣಿ ಪೋರರಿಗೆ ಮಣ್ಣಿನೊಳಗೇ ಕೆಲಸ. ಉತ್ತರ: ಗೆದ್ದಲು ಹುಳುಗಳು
ಮುಟ್ಟಬಾರದವಳು ಅಂತ ಮೆಟ್ಟೋಕೆ ಹೋದ್ರೆ ಹೆಟ್ಟಾಕ ಬಾಳೆ. ಉತ್ತರ: ಜ್ವಾಲಿ ಮುಳ್ಳು
ಮುಳ್ಳಂದಿ ಹೊಟ್ಟೇಲಿ ಮುತ್ತಿನ ಮೋಟ್ಟೆ ಉತ್ತರ: ಹಲಸಿನ ಹಣ್ಣು
ಮುಳ್ಳು ಮುಳ್ಳಿನ ಮರದಲ್ಲಿ ಮುತ್ತು ಮುತ್ತಿನಂಥಾ ಕಾಯಿ. ಉತ್ತರ: ನಿಂಬೆಹಣ್ಣು
ಮುಳ್ಳು ಮುಳ್ಳು ಮರದಲ್ಲಿ, ಮುತ್ತು ಮುತ್ತು ಕಾಯಿ ಉತ್ತರ: ನಿಂಬೆ ಹಣ್ಣು
ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ, ದೇವಾಲಯವಲ್ಲ. ಉತ್ತರ: ಗಡಿಯಾರ
ಮೂರಕ್ಷರದಿಂದ ಕಾಯಿ ಯಾವ ಕಾಯಿ. ಉತ್ತರ: ಜಾಯ್ಕಾಯಿ
ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? ಉತ್ತರ: ಭಾರತ
ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ ಉತ್ತರ: ಹೇನು ಕೂದಲು
ಮೂರು ಮೊಳ ನಾಲಿಗೆ, ೧೬೬೦೦೦ ಹಲ್ಲು, ೨ ಕೈ, ೨ ಕಾಲು ನಾನು ಯಾರು? ಉತ್ತರ:
ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ ಉತ್ತರ: ಎಲೆ ಅದಿಕೆ
ಮೂವತ್ತೆರಡು ಜನ ಅಗಿತ್ತಾರೆ, ಒಬ್ಬ ರುಚಿ ನೋಡ್ತಾನೆ ಉತ್ತರ: ಹಲ್ಲು ನಾಲಿಗೆ
ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ. ಉತ್ತರ: ಸಾಬೂನು.
ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು ಉತ್ತರ: ಕಲ್ಲಂಗಡಿ
ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ ಉತ್ತರ: ತೆಂಗು
ಮೋಟು ಗೋಡೆ ಮೇಲೆ, ದೀಪ ಉರೀತಿದೆ. ಉತ್ತರ: ಮೂಗುಬೊಟ್ಟು
ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ ಉತ್ತರ: ಇರುವೆ
ರಕ್ತವಿಲ್ಲದ ಮಾಂಸ, ಕರುಳಿಲ್ಲದ ಹೊಟ್ಟೆ ಉತ್ತರ: ಸೀಗಡಿ/Shrimp
ರಾಮ ನಂಥ ಸಮುದ್ರ ವಜ್ರದಂಥ ಮೀನು, ನೀರು ಬತ್ತಿದರೆ ಮೀನು ಸಾಯುತ್ತೆ? ಉತ್ತರ: ಹಣತೆ
ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ ಉತ್ತರ: ದೀಪ / ಹಣತೆ
ಲಟಪಟ ಲೇಡಿಗೆ ಒಂದೇ ಕಣ್ಣು ಉತ್ತರ: ಸೂಜಿ
ವನದಲ್ಲಿ ಹುಟ್ಟಿ, ವನದಲ್ಲಿ ಬೆಳೆದು, ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು. ಉತ್ತರ: ಕಮಲ.
ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ. ಉತ್ತರ: ಬೆಣ್ಣೆ ಉಂಡೆ.
ಸಕ್ಕರೆ ಕಾರ್ಖಾನೆಯಾದ್ರೂ ಸರಕ್ಕನೆ ಕೈ ಹಾಕೋಕಾಗ್ದು. ಉತ್ತರ: ಜೇನುಗೂಡು
ಸತ್ತವನೇ ಸಾವಿನ ಸುದ್ದಿ ತಗೊಂಡು ಹೋಗ್ತಾನೆ ಉತ್ತರ: ಹಲಸಿನ ಹಣ್ಣು
ಸಹೋದರ ಮತ್ತು ಸಹೋದರಿ ಶಾಲೆಗೆ ಹೋಗುವ ಒಂದು ವಸ್ತು ಕೆಳಗೆ ಬೀಳುತ್ತೆ. ಆ ವಸ್ತುವಿನ ಹೆಸರು, ಮತ್ತು ಅವರ ಹೆಸರು ಎರಡು ಒಂದೇ, ಏನದು? ಉತ್ತರ: ಸೂರ್ಯಕಾಂತಿ ಹೂ/ವಿಜಯ ವಾಣಿ ಪೇಪರ್
ಸಾಗರ ಪುತ್ರ, ಸಾರಿನ ಮಿತ್ರ. ಉತ್ತರ: ಉಪ್ಪು
ಸಾಯೋವರೆಗೂ ಹೂವಿಲ್ಲ, ಹಣ್ಣು ಮಾತ್ರ ಬಿಡ್ತದೆ ಉತ್ತರ: ಹತ್ತಿಹಣ್ಣು
ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ. ಉತ್ತರ: ದುಡ್ಡು.
ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ. ಉತ್ತರ: ಅಕ್ಕಿ
ಸಾಸಿವೆ ಗಾತ್ರದ ಕಲ್ಲು ಬಿದ್ದರೆ, ಸಾವಿರ ರೂಪಾಯಿನ ತೋಟ ಹಾಳು ಉತ್ತರ: ಕಣ್ಣು
ಸುಟ್ಟ ಹೆಣ ಮತ್ತೆ ಸುಡ್ತಾರೆ ಉತ್ತರ: ಇದ್ದಿಲು
ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು? ಉತ್ತರ: ಮೊಟ್ಟೆ
ಸುತ್ತಮುತ್ತ ಗರಿಕೆ, ನಡುವೆ ಕುಡಿಕೆ ಉತ್ತರ: ಕಣ್ಣು
ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ. ಉತ್ತರ: ಪೋಸ್ಟ್ ಕಾರ್ಡ್
ಸೂಜಿ ಸಣ್ಣಕಾಗೆ ಬಣ್ಣ ಉತ್ತರ: ಕೂದಲು
ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ? ನಾನ್ಯಾರು ಹೇಳಿ? ಉತ್ತರ: ನಕ್ಷತ್ರ
ಹಗಲು ನಿದ್ರಿಸುವೆನು, ರಾತ್ರಿ ಕಣ್ಣು ತೆರೆಯುವೆನು, ಯಾರು ನಾನು? ಉತ್ತರ: ರಸ್ತೆ ದೀಪ
ಹಗ್ಗ ಹಾಸಿದೆ ಕೋಣ ಮಲಗಿದೆ ಉತ್ತರ: ಕುಂಬಳಕಾಯಿ, ಬಳ್ಳಿ
ಹಗ್ಗ ಹಾಸಿದೆ, ಹಸು ಮಲಗಿದೆ ಉತ್ತರ: ಕುಂಬಳಕಾಯಿ
ಹತ್ತಲಾರದ ಮರ, ಎಣಿಸಲಾರದ ಕಾಯಿ ಉತ್ತರ: ರಾಗಿ ಗಿಡ
ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು ಉತ್ತರ: ಹುಂಜ
ಹತ್ತು ತಲೆಯುಂಟು ರಾವಣನಲ್ಲ, ಬಾಲವುಂಟು ಹನುಮಂತನಲ್ಲ, ಕಿರೀಟವುಂಟು ರಾಜನಲ್ಲ, ನಾನು ಯಾರು? ಉತ್ತರ: ಹೀರೇಕಾಯಿ
ಹತ್ನಾರ್ದ ಮರಕ್ಕೆ, ಹತ್ತುತನೆ ಕರಿಯಣ್ಣ ಉತ್ತರ: ಇರುವೆ
ಹರಯದಲ್ಲಿ ಹಸಿರು, ದುರದಲ್ಲಿ ಕೆಂಪು, ಮುಪ್ಪಿನಲ್ಲಿ ಕಪ್ಪು ಉತ್ತರ: ನೆರಳೆ ಹಣ್ಣು
ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು. ಉತ್ತರ: ಕೋಳಿ
ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ ಉತ್ತರ: ಕಳ್ಳಿ
ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು ಉತ್ತರ: ಪರಂಗಿ ಹಣ್ಣು
ಹಸಿರು ಕೋಲಿಗೆ ಮುತ್ತಿನ ತುರಾಯಿ ಉತ್ತರ: ಜೋಳದ ತೆನೆ
ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ ಉತ್ತರ: ಮಲ್ಲಿಗೆ
ಹಸಿರು ಮರದಲ್ಲಿ ಮೊಸರು ಚೆಲ್ಲಿದೆ ಉತ್ತರ: ಮಲ್ಲಿಗೆ
ಹಸಿರು ಮುಖಕ್ಕೆ ವಿಪರೀತ ಕೋಪ, ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ? ಉತ್ತರ: ಮೆಣಸಿನಕಾಯಿ
ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ ಉತ್ತರ: ಮಾವು
ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ ಉತ್ತರ: ಕಲ್ಲಂಗಡಿ ಹಣ್ಣು
ಹಳ್ಳಿ ಗಡಿಯಾರ, ಒಳ್ಳೆ ಆಹಾರ ಉತ್ತರ: ಕೋಳಿ
ಹಾರಾಡುತ್ತಿದೆ ಗಾಳಿಪತವಲ್ಲ, ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ ಉತ್ತರ: ಧ್ವಜ
ಹಾರಿದರೆ ಹನುಮಂತ ಕೂಗಿದರೆ ಶಂಖ. ಉತ್ತರ: ಕಪ್ಪೆ
ಹಾರಿದರೆ ಹನುಮಂತ, ಕೂಗಿದರೆ ರಾವಣ, ಕುಳಿತರೆ ಮುನಿರಾಮ ಉತ್ತರ: ಕಪ್ಪೆ
ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ ಉತ್ತರ: ಕಪ್ಪೆ
ಹಿಡಿ ಹಿಡಿದರೆ ಹಿಡಿ ತುಂಬಾ! ಬಿಟ್ಟರೆ ಮನೆ ತುಂಬಾ ಉತ್ತರ: ದೀಪ
ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ ಉತ್ತರ: ದೀಪದ ಬೆಳಕು
ಹಿಮಾಲಯ ಪರ್ವತದಿಂದ ಬಿಳಿಮೇಕೆ ಇಳಿಯುತ್ತಿದೆ. ಉತ್ತರ: ಹಿಮಪಾತ
ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ. ಉತ್ತರ: ಬದನೇಕಾಯಿ
ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ ಉತ್ತರ: ಬೆಕ್ಕು
ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ ಉತ್ತರ: ಶ್ಯಾವಿಗೆ
ಹೊಕ್ಕುವಾಗ ಒಂದು ಹೊರಟಾಗ ನೂರು ಉತ್ತರ: ಶ್ಯಾವಿಗೆ
ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ. ಉತ್ತರ: ನೆರಳು
ಹೊರಗಿನದ್ದನ್ನು ಎಸೆದು ಒಳಗಿನದ್ದನ್ನು ಬೇಯಿಸಬೇಕು! ನಂತರ ಹೊರಗಿದ್ದನ್ನು ತಿಂದು ಒಳಗಿನದ್ದನ್ನು ಎಸೆಯಬೇಕು ಉತ್ತರ: ಜೋಳ
ಹೋಗುತ್ತಾ ಬರುತ್ತಾ ಇರುವುದು ಎರಡು, ಎರಡೂ ಹೋದ ಮೇಲೆ ಬರಲಾರವು ಉತ್ತರ: ಸಿರಿತನ/ಬಡತನ ; ಪ್ರಾಣ/ಮಾನ
ಹೋಗುತ್ತಾ, ಬರುತ್ತಾ ಇರುವುದು ಎರಡು, ಹೋದ ಮೇಲೆ ಬರಲಾರವು ಎರಡು ಉತ್ತರ: ಸಿರಿತನ/ಬಡತನ ; ಪ್ರಾಣ/ಮಾನ
ಹೋಗೋದು ಮುಳುಗೋದು ತರೋದು ಏನು? ಉತ್ತರ: ಬಿಂದಿಗೆ
ಹೋದ ನೆಂಟ ಬಂದ ನೆಂಟ! ಬಂದ ದಾರಿ ಗೊತ್ತಿಲ್ಲ ಉತ್ತರ: ನೆರಳು
ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ ಉತ್ತರ: ನೆರಳು
ಹೋದರು ಇರುತ್ತೆ ಬಂದರೂ ಕಾಡುತ್ತೆ. ಇದು ಏನು? ಉತ್ತರ: ನೆನಪು